ನೈಜ ಸ್ಥಳದ ಹೆಸರಿನಲ್ಲಿ ಪ್ರಾರಂಭವಾದ ‘ಶಿವಾಜಿನಗರ’ ಇದೀಗ ‘ಶಿವಾಜಿನಗರ’ದಲ್ಲೇ ಚಿತ್ರೀಕರಣ ಮಾಡುವುದಕ್ಕಾಗಿ ಪೋಲೀಸು ಇಲಾಖೆಯಿಂದ ಅನುಮತಿ ಪಡೆದು ಚಿತ್ರೀಕರಣ ನಡೆಸಿದೆ. ಸಾಹಸ ಪ್ರಾಧಾನ ಚಿತ್ರಗಳ ಸರದಾರ ವಿಜಯ್ ಹಾಗೂ ಪರುಲ್ ಯಾದವ್ ಅವರ ಅಭಿನಯದ ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ನಿರ್ದೇಶಕ ಪಿ ಎನ್ ಸತ್ಯ ಅವರು ಪೂರ್ತಿಗೊಳಿಸಿದ್ದಾರೆ. ಇದೆ ಅಲ್ಲದೆ ಜುಬೇದ ಖಾನ್ ಅವರ ಐಟೆಮ್ ಸಾಂಗ್ ಒಂದನ್ನು ಸಹ ಮೀನೆರ್ವಾ ಮಿಲ್ ಅಲ್ಲಿ ಹಾಕಲಾದ ಸೆಟ್ ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಜುಬೇದ ಖಾನ್ ಜನಪ್ರಿಯ ಐಟೆಮ್ ಡಾನ್ಸರ್ ಮುಮೈತ್ ಖಾನ್ ಅವರ ಸಹೋದರಿ ಮುಂಬೈ ಇಂದ ಈ ಹಾಡಿಗಾಗಿ ಕರೆಸಲಾಗಿತ್ತು.
ಅಂದು ‘ಕಲಾಸಿಪಾಳ್ಯ’ ೨೦೦೫ ರಲ್ಲಿ ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿ ಜಯಭೇರಿ ಆಗಿದ್ದು ಚರಿತ್ರೆಯ ಪುಟಗಳಲ್ಲಿ ಸೇರಿದೆ. ಇಂದು ಅದೇ ಲಾಂಛನದಲ್ಲಿ ‘ಶಿವಾಜಿನಗರ’. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ ‘ಘೂಳಿ’ ನಿರ್ದೇಶನ ಮಾಡಿದ್ದರು, ನಾಯಕ ನಟ ವಿಜಯ್ ‘ಕಂಠೀರವ’ ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು.
ಜಾಸ್ಸಿ ಗಿಫ್ಟ್ ಅವರ ಸಂಗೀತ, ಸೇಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ, ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.
ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಆಯ್ಕೆ ಆಗಿದ್ದಾರೆ. ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಳಿವಾನ್ ಗಂಗಾಧರ, ಶ್ರೀ ನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವು ಅಲ್ಲದೆ ೨೦ ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.